Home ಆಯನೂರು:’ನಗದು ತುಂಬಿದ್ದ ಪರ್ಸ್ ಮಿಸ್ಸಿಂಗ್, ವಾರಸುದಾರರಿಗೆ ಮರುಳಿಸಿ ಪ್ರಮಾಣಿಕತೆ ಮೆರೆದ ಗ್ರಾಮಸ್ಥರು, ಮೆಚ್ಚುಗೆ’
HomeTaluk News

ಆಯನೂರು:’ನಗದು ತುಂಬಿದ್ದ ಪರ್ಸ್ ಮಿಸ್ಸಿಂಗ್, ವಾರಸುದಾರರಿಗೆ ಮರುಳಿಸಿ ಪ್ರಮಾಣಿಕತೆ ಮೆರೆದ ಗ್ರಾಮಸ್ಥರು, ಮೆಚ್ಚುಗೆ’

Share
Share

ಶಿವಮೊಗ್ಗ/ಆಯನೂರು:’ಇಲ್ಲಿನ ಗಣಪತಿ ದೇವಸ್ಥಾನದ ಬಳಿ ಸಿಕ್ಕ ಪರ್ಸ್ ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್‌ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್‌ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು.

ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು ಅದು ಚಿಕ್ಕಮತಲಿ ಗ್ರಾಮದ ಬಲರಾಮ್ ಎಂಬುವವರಿಗೆ ಸೇರಿದ್ದೆಂದು ಗುರುತಿಸಿದ್ದರು. ಅವರನ್ನು ಠಾಣೆಗೆ ಕರೆಸಿ ಠಾಣಾ ಪಿಎಸ್ಐ ಶಾಂತರಾಜ್ ಸಮ್ಮುಖದಲ್ಲಿ ಪರ್ಸ್ ಹಸ್ತಾಂತರಿಸಿದ್ದಾರೆ. ಕಳೆದುಹೋದ ಹಣ ಮತ್ತು ದಾಖಲೆಯನ್ನು ಪ್ರಾಮಾಣಿಕವಾಗಿ ಮರಳಿಸಿದ ಈ ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಕಾರ್ಯಕ್ಕೆ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *