Home Shivamogga News ಸರ್ಕಾರಿ ಶಾಲೆ ಜಗುಲಿಯಲ್ಲಿ ಯುವಕನ ಮೃತದೇಹ ಪತ್ತೆ: ಎಲ್ಲಿ?
Shivamogga NewsCrime

ಸರ್ಕಾರಿ ಶಾಲೆ ಜಗುಲಿಯಲ್ಲಿ ಯುವಕನ ಮೃತದೇಹ ಪತ್ತೆ: ಎಲ್ಲಿ?

Share
Share

ಹೊಸನಗರ: ʼಸರ್ಕಾರಿ ಶಾಲೆಯ ಜಗುಲಿಯ ಆವರಣದ ಮರದ ಪಕಾಸಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಹೊಸನಗರ ತಾಲ್ಲೂಕು ಬೈಸೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಘಟನೆ ನಡೆದಿದೆ.ʼ

ಬೈಸೆ ಗ್ರಾಮದ ನಿವಾಸಿ ರಾಕೇಶ್ ಜೋಗಿ (28) ಮೃತ ವ್ಯಕ್ತಿ. ರಾಕೇಶ್ ಶುಕ್ರವಾರ ರಾತ್ರಿ ಮನೆಯಿಂದ ಹಗ್ಗ ತೆಗೆದುಕೊಂಡು ಹೋಗಿದ್ದು, ಬೆಳಿಗ್ಗೆವರೆಗೂ ಮನೆಗೆ ವಾಪಾಸಾಗದ ಕಾರಣ ಪೋಷಕರು ಹುಡುಕಾಟ ನಡೆಸಿದ್ದರು. ನಂತರ ಶನಿವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *