ಶಿವಮೊಗ್ಗ:’ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಫ್ಲಿಪ್ಕಾರ್ಟ್ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.’
ತಾಲ್ಲೂಕಿನ ಆಯನೂರು ಸಮೀಪದ ಮಂಡಘಟ್ಟ ನಿವಾಸಿ ಎಸ್. ಶಿವಕುಮಾರ್ ಅವರು ಫ್ಲಿಪ್ಕಾರ್ಟ್ ಆನ್ಲೈನ್ ಮಾರುಕಟ್ಟೆಯಲ್ಲಿ ಆಫರ್ನಡಿ ₹540 ಪಾವತಿಸಿ ಪ್ರೈಮರ್ ಖರೀದಿಸಿದ್ದರು. ಆದರೆ, ಮನೆಗೆ ಬಂದ ಉತ್ಪನ್ನದ ಮೇಲಿದ್ದ ಮೂಲ ಎಂ.ಆರ್.ಪಿ ಬೆಲೆಯನ್ನು ಅಳಿಸಿ, ಅದರ ಮೇಲೆ ಬಿಳಿ ಕಾಗದ ಅಂಟಿಸಿ ಬೆಲೆಯನ್ನು ಮರೆಮಾಚಿರುವುದು ಕಂಡುಬಂದಿತ್ತು.
ತನಿಖೆಯಲ್ಲಿ ಉತ್ಪನ್ನದ ನಿಜವಾದ ಮಾರುಕಟ್ಟೆ ಬೆಲೆ ₹324 ಆಗಿದ್ದು, ಫ್ಲಿಪ್ಕಾರ್ಟ್ ಹಾಗೂ ಉತ್ತರ ಪ್ರದೇಶದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಗ್ರಾಹಕರಿಂದ ₹216 ಹೆಚ್ಚುವರಿ ವಸೂಲಿ ಮಾಡಿರುವುದು ದೃಢಪಟ್ಟಿದೆ. ಹೆಚ್ಚುವರಿ ಹಣ ಮರುಪಾವತಿಸುವಂತೆ ದೂರುದಾರರು ಲೀಗಲ್ ನೋಟೀಸ್ ನೀಡಿದರೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಇದರಿಂದ ನೊಂದ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮೊರೆ ಹೋಗಿದ್ದರು.
ದೂರುದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ, ಗ್ರಾಹಕರಿಗೆ ಮೋಸ ಮಾಡಿರುವುದು ಸತ್ಯ ಎಂದು ತೀರ್ಮಾನಿಸಿ, ಹೆಚ್ಚುವರಿ ₹216ಕ್ಕೆ ಶೇ.9 ವಾರ್ಷಿಕ ಬಡ್ಡಿ ಸೇರಿಸಿ ಮರುಪಾವತಿಸುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ಕಿರಿಕಿರಿ ಹಾಗೂ ಕಾನೂನು ವೆಚ್ಚಕ್ಕಾಗಿ ಒಟ್ಟು ₹25,000 ದಂಡವನ್ನು 45 ದಿನಗಳೊಳಗೆ ಪಾವತಿಸುವಂತೆ ಫ್ಲಿಪ್ಕಾರ್ಟ್ಗೆ ಸೂಚಿಸಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ ಶೇ.12 ಬಡ್ಡಿ ವಿಧಿಸಲಾಗುವುದು ಎಂದು ಆಯೋಗ ಎಚ್ಚರಿಸಿದೆ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment