ಶಿವಮೊಗ್ಗ:’ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಕಂಡ ಆಕರ್ಷಕ ಜಾಹೀರಾತನ್ನು ನಂಬಿ ಚಿನ್ನ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೆಸರಿನಲ್ಲಿ ₹61 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ. ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LF Work ಹೆಸರಿನಲ್ಲಿ ಮೋಸ:
ಫೇಸ್‌ಬುಕ್‌ನಲ್ಲಿ ಪ್ರಕಟವಾದ ‘LF Work’ ಕಂಪನಿಯ ಜಾಹೀರಾತಿನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಜಾಹೀರಾತಿನ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿಕೊಂಡ ಸಂತ್ರಸ್ತರನ್ನು ನಂತರ ವಾಟ್ಸಾಪ್ ಗುಂಪಿಗೆ ಸೇರಿಸಿ ಹಣ ಹೂಡಿಕೆ ಮಾಡಿಸಲಾಗಿದೆ.
ಯುಪಿಐ ಐಡಿ ಡಿಲೀಟ್:
ಹಂತ ಹಂತವಾಗಿ ವಿವಿಧ ಯುಪಿಐ ಐಡಿಗಳಿಗೆ ಹಣ ವರ್ಗಾಯಿಸುವಂತೆ ಹೇಳಲಾಗಿದ್ದು, ಹಣ ಪಾವತಿಸಿದ ತಕ್ಷಣವೇ ಆ ಯುಪಿಐ ಐಡಿಗಳನ್ನು ಡಿಲೀಟ್ ಮಾಡಲಾಗಿದೆ. ಈ ರೀತಿ ಒಟ್ಟು ₹61,00,000 ಹಣ ವಂಚಕರು ಪಡೆದುಕೊಂಡಿದ್ದಾರೆ.
ಲಾಭಾಂಶ ಸಿಗದೆ, ಮೂಲ ಹಣವೂ ವಾಪಸ್ ಬರದಾಗ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment