Home Shivamogga News ಸಮರ್ಥ ಸೇತು-ಯುವ ಶಕ್ತಿ ಅಭಿಯಾನ
Shivamogga NewsSports

ಸಮರ್ಥ ಸೇತು-ಯುವ ಶಕ್ತಿ ಅಭಿಯಾನ

Share
Share

ಶಿವಮೊಗ್ಗ: ಜೀವನದಲ್ಲಿ ಯಶಸ್ಸು ಲಭಿಸಬೇಕು ಎಂದರೆ, ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಹಂತದಲ್ಲಿ ಯಾರು ಎಡವುತ್ತಾರೋ ಅವರು ಜೀವನದ ಪಥದಲ್ಲಿ ಹಿಂದೆ ಉಳಿಯುತ್ತಾರೆ. ಆದ್ದರಿಂದ ಸರಿ ಮತ್ತು ತಪ್ಪಿನ ಅರಿವನ್ನು ತಿಳಿದು ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ದಾವಣಗೆರೆ ಪೂರ್ವ ವಲಯ ಪೋಲಿಸ್ ಮಹಾ ನಿರೀಕ್ಷಕರಾದ ಡಾ. ರವಿಕಾಂತೇ ಗೌಡ ಹೇಳಿದರು.

ಜಿಲ್ಲಾ ಪೊಲೀಸ್ ವತಿಯಿಂದ ನಗರದ ವಿವಿಧ ಪದವಿ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವೀತಿಯ ವರ್ಷದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮರ್ಥ ಸೇತು-ಯುವ ಶಕ್ತಿ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯನ್ನು ಕಂಡರೆ ಒಂದು ರೀತಿಯ ಭಯ

ಸಾಮಾನ್ಯವಾಗಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯನ್ನು ಕಂಡರೆ ಒಂದು ರೀತಿಯ ಭಯ*ಲ್ ಇದ್ದೇ ಇರುತ್ತದೆ. ನಿಮ್ಮ ಈ ಒಂದು ಆಲೋಚನೆಯನ್ನು ದೂರಗೊಳಿಸಿ ಪೊಲೀಸ್ ಇಲಾಖೆಯಲ್ಲಿರುವಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ನಿಮ್ಮನ್ನು ಸದೃಢ ಪ್ರಜೆಯನ್ನಾಗಿ ರೂಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ತಿಳಿಸಿರುವಂತಹ ರೀತಿಯಲ್ಲಿ, ಒಬ್ಬ ವ್ಯಕ್ತಿಯಲ್ಲಿರುವಂತಹ ಶಕ್ತಿಯನ್ನು ಪ್ರಚೋದಿಸಿ ಅದನ್ನು ಮುಂದೆ ತಂದು, ಆ ವ್ಯಕ್ತಿಯನ್ನು ಅಭಿವೃದ್ಧಿಯ ಪಥದಲ್ಲಿ ಕರೆದುಕೊಂಡು ಹೋಗುವುದೇ ವಿದ್ಯಾರ್ಜನೆ ಆಗಿರುತ್ತದೆ ಎಂದರು.

ಎಷ್ಟೋ ಬಾರಿ ಯಾವುದೇ ಕೆಲಸವು ಆತ್ಮವಿಶ್ವಾಸದ ಕೊರತೆಯಿಂದ ಸಾಧಿಸಲು ಸಾಧ್ಯವಾಗದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರ್ಯಕ್ರಮದ ಮುಖಾಂತರ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತಂದು ಯಾವುದೇ ಕಾರ್ಯವನ್ನು ನಾನು ಸಾಧಿಸಬಲ್ಲೆ ಎಂಬಂತಹ ದೃಢ ನಿರ್ಧಾರವನ್ನು ನೀವು ತೆಗೆದುಕೊಳ್ಳಲು ಸಶಕ್ತರನ್ನಾಗಿ ಮಾಡುವುದೇ ಮೂಲ ಉದ್ದೇಶ ಎಂದರು.

ಯಶಸ್ಸಿನ ಮೂಲ ಮಂತ್ರವೇ ಶಿಸ್ತಿನ ಚೌಕಟ್ಟಿನಲ್ಲಿ ಮುಂದೆ ಸಾಗುತ್ತಾ ಹೋಗುವುದು. ಯಾವುದೋ ಅನಾವಶ್ಯಕ ವಿಷಯಗಳಲ್ಲಿ ನೀವು ನಿಮ್ಮ ಮನಸ್ಸನ್ನು ಹರಿಬಿಟ್ಟು ಸಮಯ ವ್ಯಯ ಮಾಡಬೇಡಿ. ಭಾರತದ ಸಂವಿಧಾನದ ಚೌಕಟ್ಟಿನ ಒಳಗೆ, ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಜೀವಿಸಬೇಕಿರುವುದು ತುಂಬಾ ಮುಖ್ಯ ವಿರುತ್ತದೆ. ಈ ತರಬೇತಿಯ ಅವಧಿಯಲ್ಲಿ ಸಂವಿಧಾನದ ಮೌಲ್ಯ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ನಿಮಗೆ ತಿಳಿಸಿಕೊಡುತ್ತಿರುವುದು ತುಂಬಾ ಪ್ರಮುಖವಾದ ಅಂಶವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ,’ಪ್ರಸ್ತುತ ದಿನಮಾನಗಳಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಪೊಲೀಸ್ ಇಲಾಖೆಯು ಎದುರಿಸುತ್ತಿದೆ ಹಾಗೂ ಸಮಾಜದಲ್ಲಿ ಅದರಲ್ಲೂ ಪ್ರಮುಖವಾಗಿ ಯುವಜನತೆಯಲ್ಲಿ ಯಾವ ರೀತಿಯ ಬದಲಾವಣೆಗಳ ಅವಶ್ಯಕತೆ ಇರುತ್ತದೆ ಎಂಬ ವಿಚಾರದ ಆಧಾರವಾಗಿ ಈ ಕಾರ್ಯಕ್ರಮದ ರೂಪರೇಷೆಗಳು ಸಿದ್ಧಗೊಳಿಸಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಒಳಾಂಗಣ ಮತ್ತು ಹೊರಾಂಗಣ ವಿಷಯಗಳಾಗಿ ತರಬೇತಿಯನ್ನು ಆಯೋಜಿಸಿ, ಪೊಲೀಸ್ ಕಾರ್ಯಾ ವೈಖರಿ, ಶ್ರೇಣಿಕೃತ ಪೊಲೀಸ್ ವ್ಯವಸ್ಥೆ, ಹೊಸ ಅಪರಾಧಿಕ ಕಾನೂನುಗಳು, ಪೋಕ್ಸೋ ಕಾಯ್ದೆ, NDPS ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಡ್ರಿಲ್, ಕರಾಟೆ, ಆಯುಧಗಳ ಬಗ್ಗೆ ಪರಿಚಯ, ಡಿಸಾಸ್ಟರ್ ಮ್ಯಾನೇಜ್ಮೆಂಟ್, ಎ ಎಸ್ ಸಿ ತಂಡ, ಯೋಗ, ವ್ಯಕ್ತಿತ್ವ ವಿಕಸನ, ಸದೃಢ ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಲಾಗಿದೆ ಎಂದರು.

ಕಾರ್ಯಗಾರದಲ್ಲಿ ತರಬೇತಿ ಪೂರ್ಣಗೊಳಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ನಗರದ ವಿವಿಧ ಕಾಲೇಜುಗಳ ಒಟ್ಟು 103 ವಿಧ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡಲಾಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್, ಸಮನ್ವಯ ಟ್ರಸ್ಟ್ ವ್ಯವಸ್ಥಾಪಕ ಸಮನ್ವಯ ಕಾಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *