Home ‘ಮಾರಿಕಾಂಬಾ ಜಾತ್ರೆ, ಪೈಲ್ವಾನರ ಪೈಪೋಟಿ’: ಎಲ್ಲಿ?ಯಾವಾಗ?
HomeCultural EventsShivamogga News

‘ಮಾರಿಕಾಂಬಾ ಜಾತ್ರೆ, ಪೈಲ್ವಾನರ ಪೈಪೋಟಿ’: ಎಲ್ಲಿ?ಯಾವಾಗ?

Share
Share

ಸಾಗರ:’ಇಲ್ಲಿನ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಜನಪದ ಕ್ರೀಡೆಯಾದ ಕುಸ್ತಿಗೆ ವಿಶೇಷ ಮೆರುಗು ಸಿಗಲಿದ್ದು, ಫೆಬ್ರವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ನಗರದ ನೆಹರೂ ಮೈದಾನದಲ್ಲಿ ನಿರ್ಮಿಸಿರುವ ಸಾಂಪ್ರದಾಯಿಕ ಮಣ್ಣಿನ ಅಖಾಡದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಸ್ಪರ್ಧೆಗಳು ಆರಂಭವಾಗಲಿವೆ. ಪಂದ್ಯಾವಳಿಯ ಸುಸಂಘಟಿತ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ದೆಹಲಿ, ಹರಿಯಾಣ ಹಾಗೂ ಮಹಾರಾಷ್ಟ್ರದಿಂದ ಖ್ಯಾತ ಪೈಲ್ವಾನರುಗಳು ಆಗಮಿಸಿ ತಮ್ಮ ಶಕ್ತಿ–ತಂತ್ರಗಳನ್ನು ಪ್ರದರ್ಶಿಸಲಿದ್ದಾರೆ. ವಿಜೇತ ಪೈಲ್ವಾನರಿಗೆ ನಗದು ಬಹುಮಾನಗಳೊಂದಿಗೆ ಬೆಳ್ಳಿಯ ಗದೆ, ಬಂಗಾರ ಹಾಗೂ ಬೆಳ್ಳಿಯ ಬಳೆಗಳನ್ನು ನೀಡಲಾಗುತ್ತದೆ.

ಕುಸ್ತಿಯಲ್ಲಿ ಎದುರಾಳಿಯ ಬೆನ್ನು ಅಖಾಡದ ಮಣ್ಣಿಗೆ ತಾಗಿಸಿದ ಪೈಲ್ವಾನರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಹಿರಿಯ ಪೈಲ್ವಾನರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಪಾಯಕಾರಿಯಾಗಿ ಗುರುತಿಸಲಾದ ಕೊಕ್ಕರೆ, ಮಕಪಟ್ಟಿ ಮತ್ತು ಸವಾರಿ ಪಟ್ಟುಗಳಿಗೆ ಸಂಪೂರ್ಣ ನಿಷೇಧಿಸಲಾಗಿದೆ.

ಪ್ರತಿ ವರ್ಷ ಸಾವಿರಾರು ಕುಸ್ತಿ ಅಭಿಮಾನಿಗಳು ಅಖಾಡದತ್ತ ಹರಿದುಬಂದು ಪೈಲ್ವಾನರನ್ನು ಹುರಿದುಂಬಿಸುವುದು ಮಾರಿಕಾಂಬಾ ಜಾತ್ರೆಯ ಪ್ರಮುಖ ಆಕರ್ಷಣೆ. ಉತ್ತಮ ಪ್ರದರ್ಶನ ನೀಡಿದರೂ ಸೋಲು ಕಂಡ ಪೈಲ್ವಾನರಿಗೆ ಪ್ರೇಕ್ಷಕರೇ ಹೆಚ್ಚುವರಿ ನಗದು ಬಹುಮಾನ ನೀಡಿ ಗೌರವಿಸುವುದು ಇಲ್ಲಿ ಕಾಣುವ ವಿಶಿಷ್ಟ ದೃಶ್ಯವಾಗಿದೆ.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *