ಶಿವಮೊಗ್ಗ/ಆಯನೂರು:’ಇಲ್ಲಿನ ಗಣಪತಿ ದೇವಸ್ಥಾನದ ಬಳಿ ಸಿಕ್ಕ ಪರ್ಸ್ ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು.
ಪರ್ಸ್ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು ಅದು ಚಿಕ್ಕಮತಲಿ ಗ್ರಾಮದ ಬಲರಾಮ್ ಎಂಬುವವರಿಗೆ ಸೇರಿದ್ದೆಂದು ಗುರುತಿಸಿದ್ದರು. ಅವರನ್ನು ಠಾಣೆಗೆ ಕರೆಸಿ ಠಾಣಾ ಪಿಎಸ್ಐ ಶಾಂತರಾಜ್ ಸಮ್ಮುಖದಲ್ಲಿ ಪರ್ಸ್ ಹಸ್ತಾಂತರಿಸಿದ್ದಾರೆ. ಕಳೆದುಹೋದ ಹಣ ಮತ್ತು ದಾಖಲೆಯನ್ನು ಪ್ರಾಮಾಣಿಕವಾಗಿ ಮರಳಿಸಿದ ಈ ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಕಾರ್ಯಕ್ಕೆ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment