Home Shivamogga News ‘ಸಾರಿಗೆ ಸಚಿವರ ಸ್ಪಂದನೆ, ಬೇಳೂರು ಮನವಿಗೆ ಫಲ: ಸಾಗರಕ್ಕೆ ಹೊಸ ಬಸ್‌ಗಳು’: ಎಲ್ಲಿಂದ? ಎಲ್ಲಿಗೆ?
Shivamogga NewsTaluk News

‘ಸಾರಿಗೆ ಸಚಿವರ ಸ್ಪಂದನೆ, ಬೇಳೂರು ಮನವಿಗೆ ಫಲ: ಸಾಗರಕ್ಕೆ ಹೊಸ ಬಸ್‌ಗಳು’: ಎಲ್ಲಿಂದ? ಎಲ್ಲಿಗೆ?

Share
Share

ಶಿವಮೊಗ್ಗ:’ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಆರಂಭಿಸಲಾದ ಎರಡು ನೂತನ ನಗರ ಸಾರಿಗೆ ಬಸ್ ಸೇವೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೋಮವಾರ ಚಾಲನೆ ನೀಡಿದರು.’

ಸಾಗರ–ಸಿಗಂದೂರು ಮಾರ್ಗವಾಗಿ ನಾಗೋಡಿ, ಹುಲಿದೇವರ ಬನ, ಬ್ಯಾಕೋಡು, ಕುದೂರು, ಮರಾಠಿ ಭಾಗಗಳಿಗೆ ಹೊಸದಾಗಿ ಕಲ್ಪಿಸಿರುವ ಸಾಗರ ನಗರ ಸಾರಿಗೆ ಬಸ್ ಸೇವೆಗೆ ಶಾಸಕರೇ ಸ್ವತಃ ಬಸ್ ಚಲಾಯಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಗೋಪಾಲಕೃಷ್ಣ ಬೇಳೂರು, “ಮೂಲಭೂತ ಸೌಕರ್ಯಗಳಲ್ಲಿ ಸಾರಿಗೆ ಪ್ರಮುಖವಾದದ್ದು. ಜನಸಾಮಾನ್ಯರಿಗೆ ಸಮರ್ಪಕ ಸಾರಿಗೆ ಸೌಲಭ್ಯ ದೊರೆತರೆ ಮಾತ್ರ ಅವರ ಜೀವನ ಸುಧಾರಣೆ ಸಾಧ್ಯ. ಸಿಗಂದೂರು ಸೇತುವೆ ನಿರ್ಮಾಣವಾದ ನಂತರವೂ ತಾಲ್ಲೂಕಿನ ಕೆಲವು ಕುಗ್ರಾಮಗಳ ಜನರು ಸಾರಿಗೆ ಸೌಲಭ್ಯ ಇಲ್ಲದೆ ವಂಚಿತರಾಗಿದ್ದರು. ಇದರಿಂದ ಮಹಿಳೆಯರು ಸರ್ಕಾರದ ಶಕ್ತಿ ಯೋಜನೆಯಂತಹ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗಿರಲಿಲ್ಲ” ಎಂದು ಹೇಳಿದರು.

ಈ ಸಮಸ್ಯೆ ಕುರಿತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ಎರಡು ನಗರ ಸಾರಿಗೆ ಬಸ್‌ಗಳನ್ನು ಮಂಜೂರು ಮಾಡಿದ್ದು, ಇದೀಗ ಸಮಸ್ಯೆ ಪರಿಹಾರವಾಗಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಭಾಗದ ಜನರು ಸಾರಿಗೆ ವ್ಯವಸ್ಥೆ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಈಗ ಆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ ಎಂದರು.

ಇನ್ನೂ ಹೆಚ್ಚಿನ ಬಸ್‌ಗಳ ಅಗತ್ಯವಿದ್ದು, ಶೀಘ್ರದಲ್ಲೇ ಹೆಚ್ಚುವರಿ ಬಸ್ ಸೇವೆ ಕಲ್ಪಿಸುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ ಎಂದು ಬೇಳೂರು ಹೇಳಿದರು.

ಗ್ರಾಮಾಂತರ ಪ್ರದೇಶಗಳ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಈ ಬಸ್ ಸೇವೆ ಆರಂಭಿಸಲಾಗಿದೆ ಎಂದರು.

ಬಸ್ ಸಂಚಾರ ಸಮಯ:

ಪ್ರತಿ ದಿನ ಸಂಜೆ 5.15ಕ್ಕೆ ಸಾಗರದಿಂದ ಹೊರಟು ಸಿಗಂದೂರು, ಮರಾಠಿ ಮಾರ್ಗವಾಗಿ ನಾಗೋಡಿಗೆ ತಲುಪಲಿದೆ. ಬೆಳಿಗ್ಗೆ 7 ಗಂಟೆಗೆ ನಾಗೋಡಿಯಿಂದ ಹೊರಟು ಸಾಗರ ತಲುಪಲಿದೆ.

ಬೆಳಿಗ್ಗೆ 10.45ಕ್ಕೆ ಸಾಗರದಿಂದ ಹೊರಟು ಸಿಗಂದೂರು ಮಾರ್ಗವಾಗಿ ನಿಟ್ಟೂರಿಗೆ ತಲುಪಲಿದೆ.
ಮಧ್ಯಾಹ್ನ 1.15ಕ್ಕೆ ನಿಟ್ಟೂರಿನಿಂದ ಹೊರಟು ಸಾಗರ ಬಸ್ ನಿಲ್ದಾಣಕ್ಕೆ ತಲುಪಲಿದೆ.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *